Sunday, 30 September 2018

vishalaprabha 30/09/2018



Thursday, 27 September 2018

Thursday, 20 September 2018

ಖರ್ಗೆ-ಪರಂ ಛಲವಾದಿ ಪರಮಾಧಿಕಾರಿ

ಬಲಗೈ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜು

ತುಮಕೂರು: ಕಳೆದ ಹಲವು ದಶಕಗಳಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟದೊಂದಿಗೆ ಎಡ-ಬಲದ ಸಮೀಕರಣ ರಾಜ್ಯ ರಾಜಕಾರಣದಲ್ಲಿ ಹಲವು ಹೊಸ ಅಯಾಮಗಳಿಗೆ ನಾಂದಿ ಹಾಡಿದೆ. ಇದೀಗ ತುಮಕೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಛಲವಾದಿ ಸಮುದಾಯದ ಜನಪ್ರತಿನಿಧಿಗಳಿಗೆ ಇಂದು ನಡೆಯುತ್ತಿರುವ ಅಭಿನಂದನಾ ಸಮಾರಂಭ ಒಂದು ರೀತಿಯಲ್ಲಿ ಬಲಗೈ ಪಂಗಡದ ಶಕ್ತಿ ಪ್ರದರ್ಶನ, ಬಲವರ್ಧನೆ ಹಾಗೂ ಒಗ್ಗೂಡುವಿಕೆಯ ವೇದಿಕೆಯಾಗಿ ಪರಿಣಮಿಸಿದೆ.
ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯವನ್ನು ಅದೇ ವರ್ಗಕ್ಕೆ ಸೇರಿದ ಬಲಾಢ್ಯ ಉಪ ಪಂಗಡಗಳು ಕಬಳಿಸುತ್ತಿವೆ. ರಾಜಕೀಯ ಅಧಿಕಾರವೂ ಸೇರಿದಂತೆ ನೌಕರಿ, ವಿದ್ಯಾಭ್ಯಾಸದಲ್ಲೂ ಎಡಗೈ ಪಂಗಡಕ್ಕೆ ನಿರೀಕ್ಷಿತ ಮಟ್ಟದಲ್ಲಿ ಮೀಸಲಾತಿ ಸೌಲಭ್ಯ ದೊರೆಯುತ್ತಿಲ್ಲ ಎನ್ನುವುದು ದಶಕಗಳ ಆರೋಪದ ಕೂಗು.
ಸರ್ಕಾರದ ಅನೇಕ ವರದಿಗಳು ಹಾಗೂ ಸಮೀಕ್ಷೆಗಳ ಪರಿಣಾಮವಾಗಿ ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿರುವ ಅನೇಕ ಉಪ ಪಂಗಡಗಳು ಮೂಲ ಮೀಸಲಾತಿ ಪಟ್ಟಿಯಲ್ಲಿದ್ದ ಹಾಗೂ ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಎಡಗೈ ಸಮುದಾಯದ ಮೀಸಲಾತಿ ಸೌಲಭ್ಯದ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎನ್ನುವ ವಿಚಾರ ಮುಂದಿಟ್ಟುಕೊಂಡು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಎ, ಬಿ, ಸಿ  ವರ್ಗೀಕರಣದ ಮೂಲಕ ಜಾರಿಗೆ ತರಬೇಕು. ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಈ ಹಿಂದಿನಿಂದಲ್ಲೂ ಪ್ರಬಲವಾದ ಹೋರಾಟಗಳು, ಪಾದಯಾತ್ರೆ, ಪ್ರತಿಭಟನೆಗಳು ನಡೆದರೂ ಸರ್ಕಾರದ ಮಟ್ಟದಲ್ಲಿ ಬಲಗೈ ಪ್ರತಿನಿಧಿಗಳೇ ಮೇಲಗೈ ಸಾಧಿಸಿರುವುದರಿಂದ ದಶಕಗಳು ಕಳೆದರೂ ಸದಾಶಿವ ಆಯೋಗದ ವರದಿ ಪರಿಶೀಲನೆ ಹಂತದಲ್ಲೇ ಉಳಿದುಕೊಂಡಿದೆ.

Sunday, 9 September 2018

vishalaprabha 09-09-18 pages



ತುಮಕೂರು ಘಟಕಕ್ಕೆ ಇಸ್ರೋ ಅಧ್ಯಕ್ಷರ ಭೇಟಿ ಪರಿಶೀಲನೆ


ತುಮಕೂರು ಘಟಕಕ್ಕೆ ಇಸ್ರೋ ಅಧ್ಯಕ್ಷರ ಭೇಟಿ ಪರಿಶೀಲನೆ  

ತುಮಕೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅಧ್ಯಕ್ಷರಾದ ಡಾ: ಕೆ. ಶಿವನ್‌ರವರು ಇಸ್ರೋನ ಉನ್ನತ ಅಧಿಕಾರಿಗಳ ತಂಡದೊಂದಿಗೆ ತುಮಕೂರಿನ ಇಸ್ರೋ ಸಂಸ್ಥೆಯ ಜಾಗಕ್ಕೆ ಇಂದು (ಹಿಂದಿನ ಹೆಚ್‌ಎಂಟಿ ಜಾಗ) ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಉನ್ನತ ಅಧಿಕಾರಿಗಳ ಸಭೆ ನಡೆಸಿದರು.
ಮುಂಬರುವ ಸೋಮವಾರದಿಂದಲೇ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರಿನ ಘಟಕದಲ್ಲಿ ಅತ್ಯಂತ ಬೆಲೆ ಬಾಳುವ ಮತ್ತು ಇದುವರೆವಿಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಸೋಲಾರ್ ಸೆಲ್‌ಗಳ (ಸೌರಕೋಶ) ಮತ್ತು ಉಪಗ್ರಹ ಟ್ಯಾಂಕರ್‌ಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಇಸ್ರೋನ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ತುಮಕೂರಿನ ಉತ್ಪಾದನಾ ಘಟಕವೂ ಬಹಳ ಮಹತ್ವವಾದದು ಆಗಲಿದೆ ಎಂಬುದರ ಜೊತೆಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.
ಇಸ್ರೋ ಅಧ್ಯಕ್ಷರನ್ನು ಹಾಗೂ ಉನ್ನತ ಅಧಿಕಾರಿಗಳನ್ನು ಬರಮಾಡಿಕೊಂಡು ಉದ್ದೇಶಿತ ಯೋಜನೆಯ ಪೂರ್ಣ ವಿವರಗಳನ್ನು ಸಂಸದ ಮುದ್ದಹನುಮೇಗೌಡರು ಪಡೆದುಕೊಂಡರು.

ಇಂಧನ ಬೆಲೆ ಹೆಚ್ಚಳ ಕೇಂದ್ರದ ವೈಫಲ್ಯ

ಇಂಧನ ಬೆಲೆ ಹೆಚ್ಚಳ ಕೇಂದ್ರದ ವೈಫಲ್ಯ
ಖಂಡಿಸಿ ಸೆ.೧೦ ರಂದು ಪ್ರತಿಭಟನೆ 

ತುಮಕೂರು: ಪೆಟ್ರೋಲ್,ಡೀಸೆಲ್ ಏರಿಕೆ ಸೇರಿದಂತೆ ಕೇಂದ್ರ ಸರಕಾರದ ಎಲ್ಲಾ ವೈಫಲ್ಯಗಳನ್ನು ಖಂಡಿಸಿ ಸೆ.೧೦ರಂದು ದೇಶವ್ಯಾಪಿ ಎಡಪಕ್ಷಗಳು ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಜಿಲ್ಲೆಯಲ್ಲೂ ಮುಷ್ಕರ ಹಮ್ಮಿಕೊಂಡಿರುವುದಾಗಿ ಸಿಪಿಎಂ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಆಯೋಜಿಸಿದ್ದ ಸುದ್ದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕ ಕುಸಿತದಿಂದ ಸಾಮಾನ್ಯ ಜನರು ತತ್ತರಿಸಿಹೋಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಲೆ ಏರಿಕೆಯಿಂದ ದೇಶಾದ್ಯಂತ ಬಡವರು, ಮಧ್ಯಮವರ್ಗದವರು ನರಳುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದ್ದರೂ ಸಹ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಖಂಡನೀಯ, ಒಂದು ದೇಶ, ಒಂದೇ ತೆರಿಗೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದರ ವ್ಯಾಪ್ತಿಗೆ ತರಲಿಲ್ಲ, ಆದ್ದರಿಂದ ಕೇಂದ್ರ ಸರಕಾರ ಏರಿಸಿರುವ ಪೆಟ್ರೋಲ್ ಡೀಸೆಲ್ ಸೇರಿದಂತೆ ಏರಿಕೆ ಮಾಡಿರುವ ಎಲ್ಲಾ ತೆರಿಗೆಗಳನ್ನು ಇಳಿಸಬೇಕೆಂದು ಒತ್ತಾಯಿಸಿದರು.
ಸಿಪಿಐ ಕಾರ್ಯದರ್ಶಿ ಗಿರೀಶ್ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಯವರು ಅಧಿಕಾರಕ್ಕೆ ಬರುವ ಮುನ್ನ ಜನತೆಗೆ ಕೊಟ್ಟ ಭರವಸೆಗಳೆಲ್ಲಾ ಹುಸಿಯಾಗಿವೆ.ಇನ್ನು ಮೂರೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ೧೦೦ ರೂ. ದಾಟಿದರೂ ಆಶ್ಚರ್ಯ ಪಡಬೇಕಿಲ್ಲ,ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೇವಾಶುಲ್ಕ ವಾಪಸ್ ತೆಗೆಯದ ರೀತಿಯಲ್ಲಿ ಹಣಕಾಸು ಸಚಿವರು ಬೆಲೆ ಏರಿಕೆಯ ಶಾಕ್ ನೀಡುತ್ತಿದ್ದಾರೆ ಎಂದರು.
ರೈತರು ಮತ್ತು ಕೃಷಿ ಚಟುವಟಿಕೆ ಸಂಕಷ್ಟ ಸ್ಥಿತಿಯಲ್ಲಿದೆ.ಕೃಷಿ ಉತ್ಪಾದನಾ ವೆಚ್ಚ ಅಧಿಕವಾಗಿದ್ದು,ಇದು ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಕಾರ್ಮಿಕರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಡುತ್ತಿಲ್ಲ, ಅಸಂಘಟಿತ ಕಾರ್ಮಿಕರನ್ನು ಕಡೆಗಣಿಸುತ್ತಿದೆ ಎಂದು ದೂರಿದರು.
ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಬಂಡವಾಳಶಾಹಿಗಳ ೪ ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುವ ಮೂಲಕ ಉಳ್ಳವರ, ಶ್ರೀಮಂತರ ಪರ ನಿಂತು ಆಡಳಿತ ನಡೆಸುತ್ತಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಕೇಂದ್ರ ಸರಕಾರಕ್ಕೆ ಚಾಟಿ ಬೀಸಲು ಎಡಪಕ್ಷಗಳು ಜಂಟಿಯಾಗಿ ಸೆ.೧೦ರಂದು ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎಸ್‌ಯುಸಿಐ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಮಾತನಾಡಿ,ದೇಶದಲ್ಲಿ ಕೃಷಿಕರು,ರೈತರು ಸಾಕಷ್ಟು ಸಂಕಷ್ಟ ಅನುಭವಿ ಸುತ್ತಿದ್ದಾರೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ರೈತರ ಕೃಷಿ ಚಟುವಟಿಕೆಗಳು ಹಾಗೂ ಗೊಬ್ಬರ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ, ರೈತರ ಉತ್ಪಾದನೆಗೆ ತಕ್ಕ ಬೆಲೆ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ  ಸರಕಾರ ಸುಲಿಗೆ ಕೋರರ ಪರ ನಿಂತಿದ್ದು, ಬಂಡವಾಳಗಾರರ ಜೇಬು ತುಂಬಿಸಲು ಹೊರಟಿದೆ ಎಂದು ಆರೋಪಿಸಿದರು.
ಸಿಪಿಎಂ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ,ಕೇಂದ್ರ ಸರಕಾರದ ವಿರುದ್ಧ ಎಡಪಕ್ಷಗಳು ಜಂಟಿಯಾಗಿ ಸೆ.೧೦ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ತುಮಕೂರಿನಲ್ಲೂ ಅಂದು ಬೆಳಗ್ಗೆ ೧೧ ಗಂಟೆಗೆ ನಗರದ ಟೌನ್‌ಹಾಲ್ ವೃತ್ತದಿಂದ ಬಿಎಸ್‌ಎನ್‌ಎಲ್ ಕಚೇರಿವರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ರಸ್ತೆತಡೆ ನಡೆಸಲಾ ಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಸೆ.೧೦ರ ಭಾರತ್ ಬಂದ್


ಸೆ.೧೦ರ ಭಾರತ್ ಬಂದ್
ಸಾರ್ವಜನಿಕರು ಬೆಂಬಲಿಸಿ: ಕಾಂಗ್ರೆಸ್
 

ತುಮಕೂರು: ಪೆಟ್ರೋಲ್,ಡೀಸೆಲ್, ಗ್ಯಾಸ್ ಸಿಲಿಂಡರ್ ಹಾಗೂ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ಮತ್ತು ಕೇಂದ್ರ ಸರಕಾರದ ಜನವಿರೋಧಿ ಧೋರಣೆ ನಡೆ ವಿರುದ್ಧ ಸೆ. ೧೦ ರಂದು ಹಮ್ಮಿಕೊಂಡಿರುವ ಭಾರತ್ ಬಂದ್‌ಗೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮಾರಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ತೈಲ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಪ್ರಧಾನಿ ಮೋದಿ ಮಧ್ಯಮ ಹಾಗೂ ಬಡವರ್ಗದ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಬಂದಿದ್ದಾರೆ.ಸದಾ ಕಾರ್ಪೋರೇಟ್ ಸಂಸ್ಥೆಗಳು,ಶ್ರೀಮಂತರ ಪರವಾದ ನಿಲುವುಗಳನ್ನು ತಾಳುವ ಪ್ರಧಾನಿ ಮೋದಿಯ ಧೋರಣೆಯಿಂದ ಬಡವರು ಜೀವನ ನಡೆಸಲಾಗದೆ ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಿದರು.

ಪ್ರೊ. ಜಿಎಂಎಸ್ ಶೈಕ್ಷಣಿಕವಾಗಿ ಒಂದು ಅಕರ ಗ್ರಂಥ: ಕೆ.ದೊರೈರಾಜು

ಪ್ರೊ. ಜಿಎಂಎಸ್ ಶೈಕ್ಷಣಿಕವಾಗಿ ಒಂದು ಅಕರ ಗ್ರಂಥ: ಕೆ.ದೊರೈರಾಜು

ತುಮಕೂರು: ಇಂದು ೮೫ನೇ ವಸಂತಕ್ಕೆ ಕಾಲಿಟ್ಟಿರುವ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ನನ್ನಂತಹ ಅನೇಕರಿಗೆ ಶೈಕ್ಷಣಿಕವಾಗಿ ಅವರೊಂದು ಅಕರ ಗ್ರಂಥ ಎಂದು ಹಿರಿಯ ಚಿಂತಕ ಕೆ.ದೊರೈರಾಜು ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಹಿರಿಯ ಇತಿಹಾಸ ಉಪನ್ಯಾಸಕರು,ಚಿಂತಕರು ಆದ ಪ್ರೊ.ಜಿ.ಎಂ.ಎಸ್. ಅವರಿಗೆ ೮೫ ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು ಹಮ್ಮಿಕೊಂಡಿದ್ದ ಪ್ರೊ.ಜಿ.ಎಂ.ಎಸ್.-೮೫ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು,ಸುಮಾರು ೩೫ ವರ್ಷಗಳ ಕಾಲ ಇತಿಹಾಸದ ಮೇಸ್ಟ್ರಾಗಿ ಕೆಲಸ ಮಾಡಿದ ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಅಪಾರ ಶಿಷ್ಯವೃಂದವನ್ನು ಹೊಂದಿದ್ದಾರೆ.ನಾನು ಸೇರಿದಂತೆ ನನ್ನಂತಹ ಅನೇಕರಿಗೆ ನೇರವಾಗಿ ಬೋಧನೆ ಮಾಡದಿದ್ದರೂ,ವ್ಯಕ್ತಿತ್ವ,ನಡೆ,ನುಡಿ ಮೂಲಕ ಬದುಕಿನ ಪಾಠ ಹೇಳಿದವರು ಜಿ.ಎಂ.ಎಸ್,ತಾವು ನಂಬಿದ್ದ ಸಿದ್ದಾಂತ ದೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳದೆ, ಉತ್ತಮ ಶಿಕ್ಷಕರಾಗಿ, ದಕ್ಷ ಆಡಳಿತಗಾರರಾಗಿ, ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುವ ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡವರು.ಅವರಲ್ಲಿರುವ ಜ್ಞಾನ, ಮಾನವೀಯ ಗುಣಗಳು ಮತ್ತು ವಿವೇಕ ನನ್ನ ಮತ್ತು ಅವರ ಒಡನಾಟವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು.
ಪ್ರೊ.ಜಿ.ಎಂ.ಎಸ್.ಜೀವನ ಕುರಿತು ಹಿರಿಯ ಪತ್ರಕರ್ತ ಕೆ.ಈ.ಸಿದ್ದಯ್ಯ ಅವರು ಹೊರತಂದಿರುವ ತಿಳಿ ನೀರ ಹಾದಿಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರ ದಿನೇಶ ಅಮಿನ್‌ಮಟ್ಟು, ತುಮಕೂರು ನನ್ನ ಪಾಲಿಗೆ ತವರುಮನೆ ಇದ್ದಂತೆ, ಪ್ರೊ.ಜಿ.ಎಂ.ಎಸ್. ಹಾಗೂ ಕೆ.ದೊರೈರಾಜು ಅವರುಗಳು ನನ್ನ ಆತ್ಮಸಾಕ್ಷಿ ಎಂಬುದು ನನ್ನ ನಂಬಿಕೆ ಎಂದು ಬಣ್ಣಸಿದರು. ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರ ಜೀವನವನ್ನು ಸಿದ್ದಯ್ಯ ಈ ಸಣ್ಣ ಪುಸ್ತಕದಲ್ಲಿ ಅಚ್ಚುಕಟ್ಟಾಗಿ ಮುದ್ರಿಸಿದ್ದು,ಭಾರತ ಎಲ್ಲಾ ದೌರ್ಬಲ್ಯಗಳನ್ನು ಮೆಟ್ಟಿನಿಂತಿದೆ ಎಂದು ದೇಶವನ್ನು ವಿಶ್ವಗುರುವನ್ನಾಗಿಸಲು ಹೊರಟಿರುವ ಮನುವಾದಿಗಳ ಮುಖಕ್ಕೆ ಈ ಪುಸ್ತಕವನ್ನು ಹಿಡಿಯಬೇಕಿದೆ ಎಂದರು.
ಜಾತಿ ಹೆಸರಿನಲ್ಲಿ ಹೋರಾಟ ನಡೆಸುತ್ತಲೇ ಅತ್ಯಂತ ಜಾತಿವಾದಿಯಾಗಿ ರೂಪಗೊಳ್ಳುತ್ತೀರುವ ಹಲವರನ್ನು ನಾನು ಕಂಡಿದ್ದೇನೆ. ಆದರೆ ಎಂದಿಗೂ ತಮ್ಮ ಜಾತಿಯನ್ನು ಮುಂದಿಡದೆ, ವ್ಯಕ್ತಿತ್ವ ಮತ್ತು ತಾವು ನಂಬಿದ್ದ ಆದರ್ಶಗಳ ಮೂಲಕವೇ ಜಾತಿಯನ್ನು ಮೀರಿ ಬೆಳೆದು,ನಿಜ ಅರ್ಥದಲ್ಲಿ ವಿಶ್ವ ಮಾನವರಾದವರು ಪ್ರೊ.ಜಿ.ಎಂ.ಎಸ್ ಎಂದ ಅವರು, ನಾವು ನಕ್ಸಲ್‌ರ ಪ್ರತಿಪಾದಿಸುತ್ತಿರುವ ವಿಚಾರದ ಬಗ್ಗೆ ಸಹಮತವಿದ್ದರೂ, ಅದನ್ನು ಸಾಧಿಸಲು ತುಳಿಯುತ್ತಿರುವ ದಾರಿಯ ಬಗ್ಗೆ ವಿಶ್ವಾಸ ಹೊಂದಿಲ್ಲ.ನಕ್ಸಲ್ ಹಿಂಸೆಗಿಂತ ಜಾತಿ ಹಿಂಸೆಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ದಿನೇಶ್ ಅಮಿನ್ ಮಟ್ಟು ನುಡಿದರು.
ಕಾರ್ಯಕ್ರಮದಲ್ಲಿ ಪ್ರೊ.ರವಿವರ್ಮಕುಮಾರ್,ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್,ಲೇಖಕಿ ಮಲ್ಲಿಕಾ ಬಸವರಾಜು, ಶ್ರೀಮತಿ ಚೇತನ ಬಾಲಕೃಷ್ಣ,ಜಿಲ್ಲಾ ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ ಮತ್ತಿತರರು ವೇದಿಕೆಯಲ್ಲಿದ್ದರು.
೮೪ನೇ ವಸಂತ ಪೂರೈಸಿ, ೮೫ನೇ ವರ್ಷಕ್ಕೆ ಕಾಲಿಟ್ಟ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರನ್ನು ಅವರ ಒಡನಾಡಿಗಳು, ಶಿಷ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಭಿನಂದಿಸಿದರು. 

ಜಿಲ್ಲೆಯನ್ನು ಬರಪಿಡೀತವೆಂದು ಘೋಷಿಸಲು ಬಿಜೆಪಿ ರೈತಮೋರ್ಚಾ ಒತ್ತಾಯ

ಜಿಲ್ಲೆಯನ್ನು ಬರಪಿಡೀತವೆಂದು ಘೋಷಿಸಲು ಬಿಜೆಪಿ ರೈತಮೋರ್ಚಾ ಒತ್ತಾಯ

ತುಮಕೂರು: ಕಳೆದ ವರ್ಷಕ್ಕಿಂತ ಈ ಭಾರಿ ಜಿಲ್ಲೆಯಲ್ಲಿ ಮಳೆಯ ಅಭಾವ ಹೆಚ್ಚಾಗಿರುವ ಪರಿಣಾಮ ಬೆಳೆಗಳೆಲ್ಲಾ ಸಂಪೂರ್ಣ ಒಣಗಿ ಹೋಗಿ ಭೀಕರ ಬರಗಾಲಕ್ಕೆ ತುತ್ತಾಗಿದ್ದು,ಜಿಲ್ಲಾಡಳಿತ ಮತ್ತು ಸರಕಾರ ಕೂಡಲೇ ಎಚ್ಚೆತ್ತು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜಿಲ್ಲೆಯಲ್ಲಿ ಶೇ.೫೪.೩೨ ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯ ಅಭಾವದಿಂದ ಶೇ.೪೬.೬೮ರಷ್ಟು ಬಿತ್ತನೆ ಕಡಿಮೆಯಾಗಿದೆ.ಈಗಾಗಲೇ ಗುಬ್ಬಿ, ಶಿರಾ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಬಿತ್ತನೆಯಾಗಿರುವ ಭತ್ತದ ಪೈರು ಸಂಪೂರ್ಣ ಒಣಗಿ ಹೋಗಿದೆ ಎಂದರು.
ಇನ್ನು ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ೧,೩೧,೩೨೯ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿತ್ತಾದರೂ ಕೇವಲ ೪೨,೬೪೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.ಬಿತ್ತನೆಯಾಗಿರುವ ಶೇಂಗಾ ಕೂಡಾ ಮಳೆಯ ಕೊರೆತೆ ಮತ್ತು ರೋಗಬಾಧೆಯಿಂದ ಶೇ.೬೦ ರಷ್ಟು ಬೆಳೆ ನಾಶವಾಗಿದೆ ಎಂದ ಅವರು,೨,೨೫,೭೦೯ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ೧,೫೫,೧೬೭ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತನೆಯಾಗಿದ್ದು, ಬಿತ್ತನೆಯಾಗಿರುವ ರಾಗಿಯೂ ಕೂಡಾ ಮಳೆ ಹಾಗೂ ನೀರಿನ ಅಭಾವದಿಂದ ಶೇ.೭೦ ರಷ್ಟು ಪೈರು ಒಣಗಿಹೋಗಿದೆ. ಇದರಿಂದ ರೈತರ ಆತಂಕ ಹೆಚ್ಚಿದ್ದು, ಜಿಲ್ಲಾಡಳಿತ ಮತ್ತು ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.

ಎತ್ತಿನಹೊಳೆ ಸಂತ್ರಸ್ಥ ಗ್ರಾಮಗಳಿಗೆ ವಾರದಲ್ಲಿ ಭೇಟಿ ನೀಡಿ ಪರಿಶೀಲನೆ

ಎತ್ತಿನಹೊಳೆ ಸಂತ್ರಸ್ಥ ಗ್ರಾಮಗಳಿಗೆ ವಾರದಲ್ಲಿ ಭೇಟಿ ನೀಡಿ ಪರಿಶೀಲನೆ

ತುಮಕೂರು: ಎತ್ತಿನಹೊಳೆ ಯೋಜನೆಯ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಫರ್ ಡ್ಯಾಂನಿಂದ ಸಂತ್ರಸ್ಥರಾಗುವ ಗ್ರಾಮಗಳಿಗೆ ಮುಂದಿನ ಒಂದೆರಡು ವಾರದಲ್ಲಿ ಖುದ್ದು ಭೇಟಿ ನೀಡಿ ಅಲ್ಲಿನ ರೈತರ ಜನರ ಅಹವಾಲುಗಳನ್ನು ಆಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಎತ್ತಿನ ಹೊಳೆ ಯೋಜನೆಯ ಬೈರಗೊಂಡ್ಲು ಬಫರ್ ಡ್ಯಾಂನ ನಿರ್ಮಾಣದ ಸಂತ್ರಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು,ಕಳೆದ ವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎತ್ತಿನ ಹೊಳೆ ಯೋಜನೆಯ ಡ್ಯಾಂ ನಿರ್ಮಾಣಕ್ಕೆ ಅಗತ್ಯವಿರುವ ಜಮೀನಿನನ್ನು ಭೂಸ್ವಾಧೀನ, ನೇರ ಖರೀದಿ ಹಾಗೂ ಬಾಡಿಗೆ,ಗುತ್ತಿಗೆ ಆಧಾರದ ಮೇಲೆ ಪಡೆಯುವ ಬಗ್ಗೆ ರೈತರೊಂದಿಗೆ ಚರ್ಚಿಸಿ ವರದಿ ನೀಡುವಂತೆ ಸೂಚಿಸಿರುತ್ತಾರೆ.  ಅದರಂತೆ ಡ್ಯಾಂ ನಿರ್ಮಾಣದಿಂದ ಮುಳುಗಡೆಯಾಗಲಿರುವ ಭಾಗದ ಗ್ರಾಮಗಳ ರೈತರು,ಸಾರ್ವಜನಿಕರನ್ನು ಪೂರ್ವಭಾವಿ ಯಾಗಿ ಕರೆದು ತಮ್ಮ ಅಹವಾಲು ಇಂದು ಆಲಿಸುತ್ತಿದ್ದೇನೆ ಎಂದರು.

ಪ್ರಗತಿ ಪುಸ್ತಕಕ್ಕೆ ಸಿಮೀತವಾಗಬಾರದು: ಡಿಸಿಎಂ ಪರಮೇಶ್ವರ್


ಪ್ರಗತಿ ಪುಸ್ತಕಕ್ಕೆ ಸಿಮೀತವಾಗಬಾರದು: ಡಿಸಿಎಂ ಪರಮೇಶ್ವರ್

ತುಮಕೂರು: ಎಲ್ಲಾ ಇಲಾಖೆಗಳ ಪ್ರಗತಿ ಕೇವಲ ಪುಸ್ತಕಕ್ಕೆ ಸಿಮೀತವಾಗಬಾರದು, ಅದು ವಾಸ್ತವವಾಗಿ ಕಾರ್ಯಗತವಾಗಬೇಕು ಹಾಗೂ ಫಲಾನುಭವಿಗಳಿಗೆ ಸೌಲಭ್ಯ ತಲುಪಬೇಕು ಎಂದು ಡಿಸಿಎಂ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾ  ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾಗರಿಕರು ಇನ್ನೂ ಜನಪ್ರತಿನಿಧಿಗಳ ಕಚೇರಿ, ಮನೆ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರೆ ಆಡಳಿತ ಮಂಕಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡಬೇಕು, ಸಿಎಂ ಜನತಾ ದರ್ಶನ, ಸಚಿವ ಭೇಟಿ ಸಂದರ್ಭವೂ ಸೇರಿದಂತೆ ನಾಗರಿಕರು ಜನಪ್ರತಿನಿಧಿಗಳ ಮನೆ ಮುಂದೆ ಬರುವುದು ನಿಲ್ಲಬೇಕಾದರೆ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

Saturday, 8 September 2018

ನೆರವಿಗೆ ಬಾರದ ಮೋದಿ: ಡಿಸಿಎಂ ಪರಂ ಆರೋಪ

ನೆರವಿಗೆ ಬಾರದ ಮೋದಿ: ಡಿಸಿಎಂ ಪರಂ ಆರೋಪ


ಕೊರಟಗೆರೆ: ರಾಜ್ಯದಲ್ಲಿ ಸತತ ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರ ಕುಟುಂಬಕ್ಕೆ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ ರಕ್ಷಣೆ ಜೊತೆ ಹಣಕಾಸಿನ ನೆರವು ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ರಾ
ಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಶ್ರೀಆಂಜನೇಯ ದೇವಾಲಯದ ಆವರಣದಲ್ಲಿ ತುಮಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರ ರಕ್ಷಣೆ ಮತ್ತು ರಕ್ಷಣೆಗಾಗಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ೧೦ ಸಾವಿರ ಕೋಟಿ ರೈತರ ಸಾಲ ಮನ್ನಾವಾಗಿದೆ. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ೪೯ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡುವುದರ ಜೊತೆ ಕೈಸಾಲ ಪಡೆದು ಬಡ್ಡಿ ಕಟ್ಟುತ್ತಿರುವ ರೈತರಿಗೆ ಋಣಮುಕ್ತ ಖಾಯಿದೆಯನ್ನು ಜಾರಿಗೆ ತರಲು ತಿರ್ಮಾನ ಮಾಡಲಾಗಿದೆ ಎಂದರು.

ಆರೋಗ್ಯದ ಹಿಡಿತಕ್ಕೆ ಯೋಗವೇ ಮದ್ದು: ಪ್ರೊ.ವೈ.ಎಸ್.ಸಿದ್ದೇಗೌಡ

ಆರೋಗ್ಯದ ಹಿಡಿತಕ್ಕೆ ಯೋಗವೇ ಮದ್ದು: ಪ್ರೊ.ವೈ.ಎಸ್.ಸಿದ್ದೇಗೌಡ

ತುಮಕೂರು: ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಿಡಿತದಲ್ಲಿಡುವ ಸಾಧನವಾಗಿದ್ದು ಪ್ರತಿಯೊಬ್ಬರು ತಮ್ಮ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್. ಸಿದ್ಧೇಗೌಡ ಕರೆ ನೀಡಿದರು.
ನಗರದ ಹನುಮಂತಪುರದಲ್ಲಿರುವ ಶ್ರೀ ಪತಂಜಲಿ ಯೋಗ ಮಂದಿರದಲ್ಲಿ  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗ ಜೀವನ ದರ್ಶನ-೨೦೧೮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆಯಿರುವ ಭಾರತೀಯ ಸಂಸ್ಕೃತಿಯಲ್ಲಿ ಯೋಗವಿದ್ಯೆ ಅಥವಾ ಯೋಗಕಲೆ ವಿಶಿಷ್ಟವಾದುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇದೇ ದೃಷ್ಟಿಯಿಂದ ಇಂದು ಇಡೀ ವಿಶ್ವವೇ ಭಾರತದ ಯೋಗವಿದ್ಯೆಯತ್ತ ಗಮನಹರಿಸುತ್ತಿದೆ ಎಂದರು.

ಗ್ರಾಹಕರ ಹಿತಕಾಪಾಡಿ: ಎಸ್.ಎಸ್.ಪುಟ್ಟಣಶೆಟ್ಟಿ

ಗ್ರಾಹಕರ ಹಿತಕಾಪಾಡಿ: ಎಸ್.ಎಸ್.ಪುಟ್ಟಣಶೆಟ್ಟಿ

ತುಮಕೂರು: ಗುಣಮಟ್ಟದ ಸೇವೆ ಒದಗಿಸುವ ಮೂಲಕ ವಿದ್ಯುತ್ ಇಲಾಖೆ ಗ್ರಾಹಕರು ಹಿತ ಕಾಪಾಡುವುದು ಪ್ರಮುಖ ಕರ್ತವ್ಯಗಳಲ್ಲಿ ಒಂದು ಎಂದು ಕರ್ನಾಟಕ ವಿದ್ಯುತ್‌ಚಕ್ತಿ ನಿಯಂತ್ರಣ ಆಯೋಗ ಮತ್ತು ವಿದ್ಯುತ್ ಲೋಕಾಯುಕ್ತರಾದ ಎಸ್.ಎಸ್.ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ನಗರದ ಎಸ್.ಐ.ಟಿಯ ಬಿರ್ಲಾ ಅಡಿಟೋರಿಯಂನಲ್ಲಿ ಬೆಸ್ಕಾಂ ವತಿಯಿಂದ ಕರ್ನಾಟಕ ವಿದ್ಯುತ್‌ಚಕ್ತಿ ನಿಯಂತ್ರಣ ಆಯೋಗ ಹಾಗೂ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ ಆಯೋಜಿಸಿದ್ದ ಗ್ರಾಹಕರ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಅಧಿಕಾರಿಗಳು ವಿದ್ಯುತ್ ಸರಬರಾಜು ಮಾಡುವಾಗ ಹಾಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಪಾಲಿಸುವುದರ ಜೊತೆ, ಜೊತೆಯಲ್ಲಿಯೇ, ನಿಗಧಿತ ಅವಧಿಯೊಳಗೆ ಗ್ರಾಹಕರ ದೂರು, ದುಮ್ಮಾನಗಳನ್ನು ನಿವಾರಿಸುವ ಮೂಲಕ ಗ್ರಾಹಕರಿಗೆ ಅನಗತ್ಯ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಶಾರ್ಟ್ ಸರ್ಕ್ಯೂಟ್: ಬ್ಯೂಟಿಪಾರ್ಲರ್ ಬೆಂಕಿಗಾಹುತಿ

ಶಾರ್ಟ್ ಸರ್ಕ್ಯೂಟ್: ಬ್ಯೂಟಿಪಾರ್ಲರ್ ಬೆಂಕಿಗಾಹುತಿ

ತುಮಕೂರು: ಬ್ಯೂಟಿ ಪಾರ್ಲರ್ ಅಂಗಡಿಯೊಂದರಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು,ಸುಮಾರು ೫ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವ ಘಟನೆ ನಗರದಲ್ಲಿಂದು ನಡೆದಿದೆ.

ನಗರದ ಬಿ.ಹೆಚ್. ರಸ್ತೆಯಲ್ಲಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಕೃಷ್ಣಮೂರ್ತಿ ಎಂಬುವರ ಬಿಲ್ಡಿಂಗ್‌ನ ನ್ಯಾಚುರಲ್ ಬ್ಯೂಟಿ ಪಾರ್ಲರ್‌ನಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಭಾಷೆ ಕಟ್ಟುವ ಕೆಲಸ ಗ್ರಾಮೀಣರಲ್ಲೇ ಹೆಚ್ಚು: ನಟ ಶಿವರಾಂ


ಭಾಷೆ ಕಟ್ಟುವ ಕೆಲಸ ಗ್ರಾಮೀಣರಲ್ಲೇ ಹೆಚ್ಚು: ನಟ ಶಿವರಾಂ

ತುಮಕೂರು: ಇಂದು ಕನ್ನಡ ಕಟ್ಟುವ ಕೆಲಸ ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ ಎಂದು ಹಿರಿಯ ಚಿತ್ರನಟ ಶಿವರಾಂ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ತಾಲೂಕು ಸೀತಕಲ್ಲು ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸೀತಕಲ್ಲು ಹೊರನಿವಾಸಿಗಳ ಸಂಘದವತಿಯಿಂದ ಆಯೋಜಿಸಿದ್ದ ಉರ್ಡಿಗೆರೆ ಹೋಬಳಿಯ ೨ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಂದು ಇಡೀ ಹೋಬಳಿಯೇ ಸಾಹಿತ್ಯ ಕಾರ್ಯಕ್ರಮವನ್ನು ತಮ್ಮ ಊರಿನ ಜಾತ್ರೆಯೋ, ಹಬ್ಬವೋ ಎಂಬ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಿದೆ.ನಗರ ಪ್ರದೇಶದಲ್ಲಿ ನಡೆಯುವ ಸಮ್ಮೇಳನಗಳಿಗೆ ಹೊಲಿಕೆ ಮಾಡಿದರೆ, ಇಂದಿನ ಕಾರ್ಯಕ್ರಮ ಅತ್ಯಂತ ಉತ್ಕೃಷ್ಟವಾಗಿದೆ ಎಂದರು.

Friday, 7 September 2018

vishalaprabha 07-09-2018 pages



ತುಮಕೂರು ಜಿಲ್ಲೆಯಲ್ಲಿ೪೦ ಚಿಕನ್ ಗುನ್ಯಾ ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ೪೦ ಚಿಕನ್ ಗುನ್ಯಾ ಪ್ರಕರಣ ದಾಖಲು
ಡಿಹೆಚ್‌ಓ ಡಾ.ಚಂದ್ರಿಕಾ.ಬಿ.ಆರ್. ಮಾಹಿತಿ

ತುಮಕೂರು:  ತುಮಕೂರು ಜಿಲ್ಲೆಯಲ್ಲಿ ಜನವರಿ ೨೦೧೮ ರಿಂದ  ದಿನಾಂಕ:೩೧-೮-೨೦೧೮ ರವರೆಗೆ ಒಟ್ಟು ೧೨೬೩ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ಇವುಗಳಲ್ಲಿ ಒಟ್ಟು ೬೪೩ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿ ೩೦ ಡೆಂಗ್ಯೂ ಮತ್ತು ೪೦ ಚಿಕನ್ ಗುನ್ಯಾ ಪ್ರಕರಣಗಳು ದೃಢಪಟ್ಟಿರುತ್ತದೆ ಎಂದು ಡಿಹೆಚ್‌ಓ ಡಾ: ಚಂದ್ರಿಕಾ ಬಿ.ಆರ್. ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಡೆಂಗ್ಯೂವಿನಿಂದ ಯಾವುದೇ ಸಂಶಯಾಸ್ಪದ ಅಥವಾ ದೃಢೀಕೃತ
ಡೆಂಗ್ಯೂವಿನಿಂದ ಮರಣ ಸಂಭವಿಸಿರುವುದಿಲ್ಲ. ಡೆಂಗಿ ಖಾಯಿಲೆಯು ಸೋಂಕು ಹೊಂದಿದ ಈಡೀಸ್ ಇಜಿಪ್ಟೈ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.  ಈ ಖಾಯಿಲೆಯ ಮುಖ್ಯ ಲಕ್ಷಣಗಳು ಇದ್ದಕ್ಕಿಂದ್ದಂತೆ ತೀವ್ರ ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈ-ಕೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿಯಾಗುತ್ತದೆ. ತೀವ್ರ ಸ್ಥಿತಿಯಲ್ಲಿ ಮಾತ್ರ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದರು.

ಶೀಘ್ರದಲ್ಲಿಯೇ ಪೊಲೀಸರಿಗೆ ೬ನೇ ವೇತನ ಆಯೋಗ ಜಾರಿ

ಶೀಘ್ರದಲ್ಲಿಯೇ ಪೊಲೀಸರಿಗೆ ೬ನೇ ವೇತನ ಆಯೋಗ ಜಾರಿ

ತುಮಕೂರು: ರಾಜ್ಯ ಪೊಲೀಸರ ವೇತನ ಹೆಚ್ಚಳ ಸಂಬಂಧ ಈಗಾಗಲೇ ೬ನೇ ವೇತನ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಪೊಲೀಸ್ ತರಬೇತಿ ಶಾಲೆ ವತಿಯಿಂದ ಏರ್ಪಡಿಸಿದ್ದ ೯ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನವನ್ನು ಇತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವೇತನದಂತೆ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಶೇ.೨೦ರಷ್ಟು ಮಹಿಳಾ ರಾಜ್ಯದಲ್ಲಿ ಪೊಲೀಸ್ ನೇಮಕ

ಶೇ.೨೦ರಷ್ಟು ಮಹಿಳಾ ರಾಜ್ಯದಲ್ಲಿ ಪೊಲೀಸ್ ನೇಮಕ
ಗೃಹ ಸಚಿವ ಡಾ.ಜಿ.ಪರಮೇಶ್ವರ್ 

100 ತುಮಕೂರು: ರಾಜ್ಯದಲ್ಲಿ ಪ್ರಸ್ತುತ ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಶೇ೫-೬ರಷ್ಟಿದ್ದು,ಇದನ್ನು ಶೇ೨೦ಕ್ಕೆ ಹೆಚ್ಚಿಸುವ ಆಲೋಚನೆ ಇಲಾಖೆಯ ಮುಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲ ಪೊಲೀಸ್ ತರಬೇತಿ ಶಾಲೆ ವತಿಯಿಂದ ಏರ್ಪಡಿಸಿದ್ದ ೯ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಗೆ ಹೆಚ್ಚು ಮಂದಿ ಮಹಿಳೆಯರು ಕೆಲಸಕ್ಕೆ ಸೇರುತ್ತಿದ್ದು, ಈಗಾಗಲೇ ಶೇ. ೫ ರಿಂದ ೬ ರಷ್ಟು ಮಂದಿ ಮಹಿಳೆಯರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ೨೫೦ಕ್ಕೂ ಹೆಚ್ಚು ಮಂದಿ ಐಪಿಎಸ್ ಅಧಿಕಾರಿಗಳಲ್ಲಿ ೨೫ಕ್ಕೂ ಅಧಿಕ ಮಹಿಳಾ ಐಪಿಎಸ್ ಅಧಿಕಾರಿಗಳಿದ್ದಾರೆ.ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ರಾಜು ಅವರು ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು ಮೆಚ್ಚುಗೆ ವ್ಯಕ್ತಪಡಿಸಿದರು.

Thursday, 6 September 2018

ಸಾಮೂಹಿಕ ವಿವಾಹ


ಗೌಸ್-ಉಲ್-ಆ ಸಾಮೂಹಿಕ ವಿವಾಹಜಾಂ ದಸ್ಗ್‌ಗೀರ್(ಆರ್.ಎ)ಕಮಿಟಿಯಿಂದ

ತುಮಕೂರು: ನಗರದ ಹಜ್ಹರತ್ ಸೈಯದನ ಗೌಸ್-ಉಲ್-ಆಜಾಂ ದಸ್ತ್‌ಗೀರ್(ಆರ್.ಎ)ಕಮಿಟಿ ವತಿಯಿಂದ ಕಳೆದ ಭಾನುವಾರ ನಗರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಿತಿಯ ಅಧ್ಯಕ್ಷರಾದ ಅತೀಕ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜಾಮಿಯಾ ಮಸೀದಿ ಮೌಲಾನಾ ಮುಫ್ತಿ ಉ
ಮರ್ ಅನ್ಸಾರಿ ಉದ್ಘಾಟಿಸಿದರು.

ಪತ್ರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಬೇಕು:ಪ್ರೊ.ವೈ.ಎಸ್.ಸಿದ್ದೇಗೌಡ

ಪತ್ರಿಕೋದ್ಯಮ ಅಭಿವೃದ್ಧಿಗೆ ಪೂರಕವಾಗಬೇಕು:ಪ್ರೊ.ವೈ.ಎಸ್.ಸಿದ್ದೇಗೌಡ

ತುಮಕೂರು: ಪತ್ರಿಕೋದ್ಯಮ ಸಮಾಜದ ಓರೆಕೋರೆಗಳನ್ನು ತಿದ್ದಿ ಅ
ಭಿವೃದ್ಧಿಗೆ ಪೂರಕವಾಗಬೇಕು.ಭವಿಷ್ಯದ ಪತ್ರಕರ್ತರು ನೈಜತೆಯನ್ನು ಎತ್ತಿಹಿಡಿಯುವುದನ್ನು ತಮ್ಮ ಗುರಿಯಾಗಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರೊಕೋದ್ಯಮ ವಿಭಾಗ ಹಾಗೂ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ’ಕ್ಯಾಂಪಸ್ ಸುದ್ದಿ’ ಮತ್ತು ’ಕಲ್ಪತರು ಟೈಮ್ಸ್’ ಪ್ರಾಯೋಗಿಕ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು,ಪ್ರಜಾಪ್ರಭುತ್ವದ ಮೂರು ಮೂಲ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಆಯಾ ಕ್ಷೇತ್ರಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತವೆ.ಆದರೆ,ಪತ್ರಿಕೋದ್ಯಮ ಎಲ್ಲ ಕ್ಷೇತ್ರಕ್ಕೂ ಸಂಬಂಧಿಸಿದ್ದು,ಸದಾ ಜಾಗೃತ ವಾಗಿರುವ ಅಂಗವೂ ಹೌದು.ಪತ್ರಿಕೋದ್ಯಮ ಸಾಕ್ಷಿ ಆಧಾರಿತ ಕಾರ್ಯವಾಗಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಕೊಠಡಿಯೊಳಗಿನ ಪಾಠಕ್ಕಿಂತಲೂ ಹೆಚ್ಚಾಗಿ ಪ್ರಾಯೋಗಿಕ ಕಾರ್ಯಗಳಲ್ಲಿ ತೊಡಗಬೇಕು ಎಂದರು.

ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಶಿಕ್ಷಣ ನೀತಿ ಜಾರಿ ಅಗತ್ಯ

ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಶಿಕ್ಷಣ ನೀತಿ ಜಾರಿ ಅಗತ್ಯ 

ತುಮಕೂರು: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅತಿ ಹೆಚ್ಚು ಮಾನವ ಶಕ್ತಿಯನ್ನು ರೂಪಿಸಿ ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿರುವ ಹೆಗ್ಗಳಿಕೆ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದರೆ ತಪ್ಪಾಗಲಾ

ರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬಿ.ಹೆಚ್. ರಸ್ತೆ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದ ಡಾ: ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿಂದು ಏರ್ಪಡಿಸಿದ್ದ  ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೧ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಕ್ಕಳ ಭೌದ್ಧಿಕ ಮಟ್ಟಕ್ಕೆ ತಕ್ಕಂತೆ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವಂತಹ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಲ್ಲಿ ಮತ್ತಷ್ಟು ಸದೃಢ ರಾಷ್ಟ್ರ ನಮ್ಮದಾಗಲಿದೆ ಎಂದರು.
ಸಮಾಜವನ್ನು ತಿದ್ದಿ ತೀಡುವಂತಹ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವಂತಹ ಶಿಕ್ಷಕರ ಬಗ್ಗೆ ಪ್ರಶಂಸನಾ ಮಾತುಗಳನ್ನಾಡುವ ದಿನವಿದು.ಇದಕ್ಕೆ ಕಾರಣ ಕರ್ತರಾದ ಡಾ:ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವಾದ ಸೆ.೫ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿಯು  ಆಧುನಿಕ ಜಗತ್ತಿನಲ್ಲಿ   ಶಾಲಾ-ಕಾಲೇಜುಗಳಾಗಿ ಬದಲಾಗಿವೆ.

Wednesday, 5 September 2018

ವಿಜಯೋತ್ಸವದ ವೇಳೆ ರಾಸಾಯನಿಕ ಎರಚಿದ ಪ್ರಕರಣ

ಉದ್ದೇಶಪೂರ್ವಕ ಘಟನೆಯಲ್ಲ: ಎಸ್.ಪಿ ಸ್ಪಷ್ಟನೆ
ತುಮಕೂರು: ತುಮಕೂರು ಮಹಾನಗರಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದ ನಂತರ ೧೬ನೇ ವಾರ್ಡ್‌ನಿಂದ ಜಯಗಳಿಸಿದ ಇನಾಯಿತ್ ಉಲ್ಲಾಖಾನ್ ಅವರು ಇಲ್ಲಿನ ಬಾರ್‌ಲೈನ್ ರಸ್ತೆಯಲ್ಲಿ ಸಂಭ್ರಮಾಚಾರಣೆ ಮಾಡುತ್ತಿದ್ದಾಗ ರಾಸಾಯನಿಕ ವಸ್ತುವಿನಿಂದ ಗುಂಪಿನಲ್ಲಿದ್ದವರಿಗೆ ಗಾಯವಾಗಿರುವ ಘಟನೆ ಉದ್ದೇಶಪೂರ್ವಕವಲ್ಲ. ಅರಿವಿಲ್ಲದೆ ಆಗಿರುವ ಆಕಸ್ಮಿಕ ಘಟನೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ|| ದಿವ್ಯಾಗೋಪಿನಾಥ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೧೬ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಕೋತಿತೋಪಿನಿಂದ ಗೆದ್ದ ಅಭ್ಯರ್ಥಿಯೊಂದಿಗೆ ಕಾರ್ಯಕರ್ತರು ವಿಜಯೋತ್ಸವದೊಂದಿಗೆ ಬಾರ್‌ಲೈನ್‌ನ ೩ನೇ ಕ್ರಾಸ್‌ಗೆ ಬಂದಾಗ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬಾಟಲಿಯಿಂದ ದ್ರಾವಣವನ್ನು ಗುಂಪಿನ ಮೇಲೆ ಎರಚಿದಾಗ ಕೆಲವರಿಗೆ ಗಾಯಗಳಾಗಿದ್ದು,ಇದನ್ನು ಆಸಿಡ್ ದಾಳಿ ಎಂದು ತಪ್ಪಾಗಿ ಬಿಂಬಿಸಲಾಗಿತ್ತು.

ಸಮಾಧಿ ಸಂರಕ್ಷಣೆಗೆ ದಲಿತ ಸಂಘಟನೆಗಳ ಒತ್ತಾಯ

ಬೂದಗವಿಯ ದಲಿತರ ಶರಣರ ಸಮಾಧಿ ಸಂರಕ್ಷಣೆಗೆ ದಲಿತ ಸಂಘಟನೆಗಳ ಒತ್ತಾಯ

ತುಮಕೂರು.ಸೆ.೦೪: ಕೊರಟಗೆರೆ ತಾಲೂಕು ಸಿದ್ದರಬೆಟ್ಟದ ಬೂದುಗವಿ ಬಳಿ ಇರುವ ದಲಿತ ಸಮುದಾಯಕ್ಕೆ ಸೇರಿದ ಶರಣರಾದ ಶ್ರೀಚನ್ನಿಗಮ್ಮ ಮತ್ತು  ಶ್ರೀಗಂಗಪ್ಪ ಅವರುಗಳ ಪುರಾತನ ಸಮಾಧಿಗಳನ್ನು ಅರಣ್ಯ ಇಲಾಖೆ ರಕ್ಷಿಸಬೇಕು ಹಾಗೂ ಸಮಾಧಿಗಳ ಪೂಜೆ ಕೈಂಕರ್ಯಕ್ಕೆ ಅನುವು ಮಾಡಿಕೊಡಬೇಕೆಂದು ಮಾದಿಗ ವಿಮೋಚನಾ ಸ್ವಾಭಿಮಾನಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೇಶವಮೂರ್ತಿ ಸರಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬಸವಣ್ಣನವರ ಕಾಯಕ, ದಾಸೋಹ ಶರಣ ಸಂಸ್ಕೃತಿಗೆ ಮಾರುಹೋದ ಶ್ರೀಚನ್ನಿಗಮ್ಮ ಮತ್ತು ಶ್ರೀಗಂಗಪ್ಪ ಅವರುಗಳು, ಸಿದ್ದರಬೆಟ್ಟದ ತಪ್ಪಲಿನ ೩:೨೦ ಎಕರೆ ಜಾಗದಲ್ಲಿ ಒಂದು ಸಣ್ಣ ಕೊಳ ನಿರ್ಮಿಸಿಕೊಂಡು,ಸಿದ್ದರಬೆಟ್ಟದ ಸಿದ್ದೇಶ್ವರಸ್ವಾಮಿಗೆ ದರ್ಶನಕ್ಕೆ ಬರುವ ಭಕ್ತರ,ಸ್ವಾಮಿಜಿಗಳ ಸೇವಾ ಮಾಡುತ್ತಾ, ಅವರಿಗೆ ದಾಸೋಹ ನೀಡುತ್ತಾ ತಮ್ಮ ಕಾಯಕ ತತ್ವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿರುತ್ತಾರೆ.ಇದರ ಕುರುಹಾಗಿ ಸಿದ್ದರಬೆಟ್ಟಕ್ಕೆ ಹತ್ತುವ ಮೊದಲನೇಯ ಮೆಟ್ಟಿಲಿನಲ್ಲಿ ಶ್ರೀಚನ್ನಿಗಪ್ಪ ಮೆಟ್ಟಿಲು ಎಂದು ಹೆಸರಿಟ್ಟಿದ್ದು, ಭಕ್ತರು ಇಂದಿಗೂ ಅದನ್ನು ಶ್ರದ್ದಾ, ಭಕ್ತಿಯಿಂದ ಪೂಜಿಸುತ್ತಾರೆ. ಇಂದು ಒಂದು ಐತಿಹಾಸಿಕ ದಾಖಲೆಯಾಗಿದೆ.

ಎಂಎನ್‌ಆರ್‌ಇಜಿಎ ನಲ್ಲಿ ೧೨ ಲಕ್ಷ ಮಾನವ ದಿನ ಸೃಜನೆ

ಹಣ ಪಾವತಿಯಲ್ಲಿ ರಾಜ್ಯಕ್ಕೆ ಮೊದಲನೆ ಸ್ಥಾನ: ಸಿಇಓ 

ತುಮಕೂರು: ಜಿಲ್ಲೆಯು ಪ್ರಸ್ತಕ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿ ನಿಗಧಿ ಪಡಿಸಲಾಗಿದ್ದ ೫೮.೮೨ ಲಕ್ಷ ಮಾನವ ದಿನಗಳ ಸೃಜನೆಯಲ್ಲಿ ಇದುವರೆಗೆ ೧೨ ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು,೧೦೨ ಕೋಟಿ ರೂ ಪಾವತಿಸಿದ್ದು,ಶೇ೯೯.೯೮ರಷ್ಟು ಕೂಲಿ ಹಣವನ್ನು ಪಾವತಿಸುವ ಮೂಲಕ
ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿ.ಪಂ.ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೨೦೧೮-೧೯ನೇ ಸಾಲಿನಲ್ಲಿ ಜಿಲ್ಲೆಗೆ ೨೫೮.೭೬ ಕೋಟಿ ರೂಗಳ ಗುರಿ ನಿಗಧಿ ಮಾಡಿದ್ದು, ಇದರಲ್ಲಿ ಕೂಲಿಗೆ ೧೫೫.೨೫ ಕೋಟಿ ಹಾಗೂ ಸಾಮಗ್ರಿಗಳಿಗೆ ೧೦೩.೫೦ ಕೋಟಿ ಮೀಸಲಿದ್ದು,೨೦೧೮ರ ಆಗಸ್ಟ್ ಅಂತ್ಯಕ್ಕೆ ೩೧.೩೫ ಕೋಟಿ ಕೂಲಿ, ೭೦.೮೩ ಕೋಟಿ ರೂಗಳ ಸಾಮಗ್ರಿಗಳಿಗೆ ಹಣ ನೀಡಲಾಗಿದೆ.ಒಟ್ಟಾರೆ ೧೨.೦೧ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.

ಸೆ.೦೭ರಂದು ಸೀತಕಲ್ಲು ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ


ಸೆ.೦೭ರಂದು ಸೀತಕಲ್ಲು ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ

ತುಮಕೂರು: ಊರ್ಡಿಗೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಸೀತಕಲ್ಲು ಹೊರನಿವಾಸಿಗಳ ಒಕ್ಕೂಟದ ವತಿಯಿಂದ ಸೆ.೭ರಂದು ತಾಲ್ಲೂಕಿನ ಸೀತಕಲ್ಲು ಗ್ರಾಮದಲ್ಲಿ ಊರ್ಡಿಗೆರೆ ಹೋಬಳಿ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷೆ ಬಿ.ಸಿ.ಶೈಲಾನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸೆ.೦೭ರ ಬೆಳಗ್ಗೆ ೭.೩೦ಕ್ಕೆ ಸೀತಕಲ್ಲು ಗ್ರಾಪಂ ಅಧ್ಯಕ್ಷೆ ನರಸಮ್ಮ ಅವರಿಂದ ರಾಷ್ಟ್ರಧ್ವಜ,ಊರ್ಡಿಗೆರೆ ಕಸಾಪ ಅಧ್ಯಕ್ಷ ಹೊನ್ನಾರು ರಂಗಸ್ವಾಮಿ ಅವರಿಂದ ನಾಡಧ್ವಜ, ತಾಲ್ಲೂಕು ಕಸಾಪ ಅಧ್ಯಕ್ಷೆ ಬಿ.ಸಿ.ಶೈಲಾನಾಗರಾಜ್ ಅವರಿಂದ ಪರಿಷತ್ತು ಧ್ವಜಾರೋಹಣ ನೆರವೇರಲಿದೆ ಎಂದರು.

ಮತದಾರರ ಪಟ್ಟಿ ಗೊಂದಲ ಬಿಜೆಪಿ ಗೆಲುವಿಗೆ ಅಡ್ಡಿ: ಜ್ಯೋತಿ ಗಣೇಶ್


ಮತದಾರರ ಪಟ್ಟಿ ಗೊಂದಲ ಬಿಜೆಪಿ ಗೆಲುವಿಗೆ ಅಡ್ಡಿ: ಜ್ಯೋತಿ ಗಣೇಶ್

ತುಮಕೂರು: ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದ ಮೇಲೆ ಪಾಲಿಕೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿ ಕಳೆದ ಭಾರಿಗಿಂತ ಮೂರುಪಟ್ಟು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಮತದಾರರಪಟ್ಟಿಯಲ್ಲಿನ ಕೆಲವೊಂದು ಲೋಪದೋಷಗಳಿಂದ ಇನ್ನೂ ಕೆಲವು ವಾರ್ಡುಗಳಲ್ಲಿ ಗೆಲುವಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಮೀಸಲಾಯಿತಿ ಪ್ರಕಟ



ಮೇಯರ್ ಸ್ಥಾನ ಬಿಸಿಎಂ(ಎ), ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ-ಮಹಿಳೆ





ತುಮಕೂರು: ತುಮಕೂರು ನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಮೀಸಲಾತಿ ಪ್ರಕಟವಾಗಿದ್ದು, ಮೇಯರ್ ಬಿ.ಸಿ.ಎಂ.(ಎ) ಮಹಿಳೆಗೂ, ಉಪಮೇಯರ್ ಪರಿಶಿಷ್ಟ ಜಾತಿ ಮಹಿಳೆಗೂ ಮೀಸಲಾಗಿದೆ. 
ಪಾಲಿಕೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ೯ಜನ ಮಹಿಳಾ ಅಭ್ಯರ್ಥಿಗಳು ಆಯ್ಕೆಗೊಂಡಿದ್ದು, ಇವರಲ್ಲಿ ಒಂದನೇ ವಾರ್ಡಿನಿಂದ ನಳಿನಿ ಇಂದ್ರಕುಮಾರ್, ೧೫ ವಾರ್ಡಿನಿಂದ ವಿ.ಎಸ್.ಗಿರಿಜಾ, ೨೭ ವಾರ್ಡಿನಿಂದ ಚಂದ್ರಕಲಾ ಅವರುಗಳು ಬಿಜೆಪಿ ಪಕ್ಷದ ಗೆಲುವು ಪಡೆದಿದ್ದರೆ, ಕಾಂಗ್ರೆಸ್ ಪಕ್ಷದಿಂದ ೧೦ನೇ ವಾರ್ಡಿನ ನೂರು ಉನ್ನಿಸಾ, ೧೩ನೇ ವಾರ್ಡಿನಿಂದ ಫರಿದಾ ಬೇಗಂ, ೧೪ನೇ ವಾರ್ಡಿನಿಂದ ನಾಜೀರಾ ಬಾನು, ೨೯ನೇ ವಾರ್ಡಿನಿಂದ ನಾಜೀಮಾ ಬೀ ಅವರುಗಳು ಆಯ್ಕೆಯಾದರೆ, ಜೆಡಿಎಸ್‌ನಿಂದ ಮಾಜಿ ಮೇಯರ್ ಲಲಿತಾ ರವೀಶ್ ಎರಡನೇ ಬಾರಿಗೆ ೨೧ನೇ ವಾರ್ಡಿನಿಂದ ಆಯ್ಕೆಯಾಗಿದ್ದಾರೆ.

Sunday, 2 September 2018

ರಸ್ತೆ ಬದಿ ಗುಡಿಸಲಲ್ಲಿ ವಾಸವಿದ್ದ ಕುಟುಂಬದ ಎತ್ತಂಗಡಿಗೆ ಯತ್ನ


ಗ್ರಾ.ಪಂ.ಅಧಿಕಾರಿಗಳ ವಿರುದ್ದ ದಲಿತರ ಪ್ರತಿಭಟನೆ

ತುಮಕೂರು.ಸೆ.೦೧:ಪಂಚಾಯಿತಿ ಹಾಗೂ ಸರಕಾರಿ ಜಾಗವಲ್ಲದಿದ್ದರೂ ಹತ್ತಾರು ವರ್ಷಗಳಿಂದ ವಾಸವಿರುವ ಜಾಗವನ್ನು ಖಾತೆ ಮಾಡಿಕೊಡದೆ,ಬಡ ದಲಿತ ಕುಟುಂಬವೊಂದನ್ನು ಎತ್ತಂಗಡಿ ಮಾಡಲು ಹೊರಟಿರುವ ಸಿ.ಎಸ್.ಪುರ ಗ್ರಾಮಪಂಚಾಯಿತಿ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಸಿ.ಎಸ್.ಪುರ(ಚಂದ್ರಶೇಖರಪುರ)ದಲ್ಲಿ ಕಳೆದ ೩೦ ವರ್ಷಗಳಿಂದ ರಂಗಸ್ವಾಮಿ ಎಂಬುವವರು ರಸ್ತೆಯ ಒಂದು ಬದಿಯಲ್ಲಿ ೧೯೯೪  ರಿಂದಲೂ ಗ್ರಾಮಪಂಚಾಯಿತಿ ಪರವಾನಗಿ ಪಡೆದು ಚಪ್ಪಲಿ ಹೊಲೆಯುವ ಮತ್ತು ಪೋಟೋಗೆ ಕಟ್ಟು,ಗಾಜು ಹಾಕುವ ಒಂದು ಸಣ್ಣ ಗೂಡಂಗಡಿ ಇಟ್ಟುಕೊಂಡು,ಜೀವನ ನಡೆಸುತಿದ್ದರು.

ಜಮೀರ್ ರಾಜೀನಾಮೆಗೆ ಸೊಗಡು ಆಗ್ರಹ

ಜಮೀರ್ ರಾಜೀನಾಮೆಗೆ ಸೊಗಡು ಆಗ್ರಹ

ತುಮಕೂರು: ಬಿಜೆಪಿಗೆ ಮತ ನೀಡುವವರು ನಿಜವಾದ ಮುಸ್ಲೀಂರಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಆಹಾರ ನಾಗರೀಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಮಾಜಿ ಸಚಿವ ಎಸ್.ಶಿವಣ್ಣ ಒತ್ತಾಯಿಸಿದ್ದಾರೆ.
ಸದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಮತ ನೀಡಿದರೆ ಅವರು ನಿಜವಾದ ಮುಸ್ಲಿಮರೇ ಅಲ್ಲ ಎಂಬ ಹೇಳಿಕೆ ನೀಡಿದ್ದು ಇದು ಖಂಡನೀಯ.ಸ್ವಾತಂತ್ರ್ಯ ನಂತರ ದಿಂದಲೂ ಭಾರತದಲ್ಲಿ ಹಿಂದೂ ಮುಸಲ್ಮಾನರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದು,ಜಮೀರ್‌ರಂತಹ ಕೆಲವರು ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದು, ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

vishalaprabha 01-08-18 pages



vishalaprabha 09-02-2019 pages