ಗೌಸ್-ಉಲ್-ಆ ಸಾಮೂಹಿಕ ವಿವಾಹಜಾಂ ದಸ್ಗ್‌ಗೀರ್(ಆರ್.ಎ)ಕಮಿಟಿಯಿಂದ
ಸಮಿತಿಯ ಅಧ್ಯಕ್ಷರಾದ ಅತೀಕ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜಾಮಿಯಾ ಮಸೀದಿ ಮೌಲಾನಾ ಮುಫ್ತಿ ಉ
ಮರ್ ಅನ್ಸಾರಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ೧೨ ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದು,ಹಜ್ಹರತ್ ಮದಾರ್-ಷಾ. ಮಸೀದಿಯ ಮೌಲಾನಾ ಅಬ್ದುಲ್ ಶುಕೂರ್ ಅವರು ವಿವಾಹ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಮೌಲಾನಾ ಕಲೀಂ ಉಲ್ಲಾ ಅವರ ಹೊಸ ಜೋಡಿಗಳಿಗೆ ವಿವಾಹದ ಮಹತ್ವ ಮತ್ತು ಆನಂತರದ ಹೊಂದಾಣಿಕೆಯ ಸಂಸಾರಿಕ ಜೀವನದ ಬಗ್ಗೆ ತಿಳಿಸಿಕೊಟ್ಟರು.
ವಧು, ವರರ ಕಡೆಯವರಲ್ಲದೆ ಸಾರ್ವಜನಿಕರು ಸೇರಿದಂತೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೩೦೦೦ಕ್ಕೂ ಅಧಿಕ ಜನರು ಭಾಗವಹಿಸಿ, ನೂತನ ವಧು, ವರರನ್ನು ಆಶೀರ್ವದಿಸಿದರು.
ಈ ವೇಳೆ ಹಜ್ಹರತ್ ಸೈಯದನ ಗೌಸ್-ಉಲ್ -ಆಜಾಂ ದಸ್ತ್‌ಗೀರ್(ಆರ್‌ಎ) ಕಮಿಟಿಯ ಉಪಾಧ್ಯಕ್ಷರಾದ ಫಯಾಜ್ ಅಹಮದ್,ಪ್ಯಾರೇಜಾನ್ ಸಾಬ್,ಕಾರ್ಯದರ್ಶಿ ಎಂ.ಫಯಾಜ್ ಅಹಮದ್, ಜಂಟಿ ಕಾರ್ಯದರ್ಶಿ ಮಹಮದ್ ಸಲೀಂ ಪಾಷ(ಭಾಷಾ),ಸಂಘಟನಾ ಕಾರ್ಯದರ್ಶಿಗಳಾದ ಅಬ್ದುಲ್ ವಾಜೀದ್,ಖಜಾಂಚಿಯಾದ ನಾಸೀರ್ ಪಾಷ, ಕಾನೂನು ಸಲಹೆಗಾರರಾದ ಜಬೀವುಲ್ಲಾ ಹಾಗೂ ನಿರ್ದೇಶಕರುಗಳ ಭಾಗವಹಿಸಿದ್ದು, ಮುಂದಿನ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ೨೦೧೯ರ ಜನವರಿಯಲ್ಲಿ ನಡೆಸಲಾಗುವುದು ಎಂದು ಕಮಿಟಿ ಅಧ್ಯಕ್ಷ ಅತೀಕ್ ಅಹಮದ್ ಘೋಷಿಸಿದ್ದಾರೆ.
No comments:
Post a Comment