Wednesday, 5 September 2018

ಎಂಎನ್‌ಆರ್‌ಇಜಿಎ ನಲ್ಲಿ ೧೨ ಲಕ್ಷ ಮಾನವ ದಿನ ಸೃಜನೆ

ಹಣ ಪಾವತಿಯಲ್ಲಿ ರಾಜ್ಯಕ್ಕೆ ಮೊದಲನೆ ಸ್ಥಾನ: ಸಿಇಓ 

ತುಮಕೂರು: ಜಿಲ್ಲೆಯು ಪ್ರಸ್ತಕ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿ ನಿಗಧಿ ಪಡಿಸಲಾಗಿದ್ದ ೫೮.೮೨ ಲಕ್ಷ ಮಾನವ ದಿನಗಳ ಸೃಜನೆಯಲ್ಲಿ ಇದುವರೆಗೆ ೧೨ ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದು,೧೦೨ ಕೋಟಿ ರೂ ಪಾವತಿಸಿದ್ದು,ಶೇ೯೯.೯೮ರಷ್ಟು ಕೂಲಿ ಹಣವನ್ನು ಪಾವತಿಸುವ ಮೂಲಕ
ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿ.ಪಂ.ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೨೦೧೮-೧೯ನೇ ಸಾಲಿನಲ್ಲಿ ಜಿಲ್ಲೆಗೆ ೨೫೮.೭೬ ಕೋಟಿ ರೂಗಳ ಗುರಿ ನಿಗಧಿ ಮಾಡಿದ್ದು, ಇದರಲ್ಲಿ ಕೂಲಿಗೆ ೧೫೫.೨೫ ಕೋಟಿ ಹಾಗೂ ಸಾಮಗ್ರಿಗಳಿಗೆ ೧೦೩.೫೦ ಕೋಟಿ ಮೀಸಲಿದ್ದು,೨೦೧೮ರ ಆಗಸ್ಟ್ ಅಂತ್ಯಕ್ಕೆ ೩೧.೩೫ ಕೋಟಿ ಕೂಲಿ, ೭೦.೮೩ ಕೋಟಿ ರೂಗಳ ಸಾಮಗ್ರಿಗಳಿಗೆ ಹಣ ನೀಡಲಾಗಿದೆ.ಒಟ್ಟಾರೆ ೧೨.೦೧ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.



ಜಿಲ್ಲೆಯಲ್ಲಿ ಒಟ್ಟು ೩,೪೨,೪೨೯ ಜಾಬ್ ಕಾರ್ಡುಗಳಿದ್ದು, ಇದರಲ್ಲಿ ೫೫,೩೩೭ ಪರಿಶಿಷ್ಟ ಜಾತಿ ಮತ್ತು ೨೫,೮೬೬ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು,೪೩,೦೯೮ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ.೧೯೩ ಕುಟುಂಬಗಳಿಗೆ ೧೦೦ ದಿನಗಳ ಕಾಲ ಉದ್ಯೋಗ ನೀಡಲಾಗಿದೆ.ಸಾಮೋಹಿಕ ಅಭಿವೃದ್ದಿಯ ಜೊತೆಗೆ, ವಯುಕ್ತಿಕ ಅಭಿವೃದ್ದಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮುಖ್ಯಮಂತ್ರಿಗಳ ೨೧ ಅಂಶಗಳ ಕಾರ್ಯಕ್ರಮದ ಜೊತೆಗೆ, ಹೊಸದಾಗಿ ಶಾಲಾ, ಕಾಲೇಜುಗಳ ಕಾಂಪೌಂಡ್ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ,ಕುಡಿಯುವ ನೀರಿನ ವ್ಯವಸ್ಥೆ, ಶಾಲಾ, ಕಾಲೇಜು, ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣದಂತಹ ಕಾರ್ಯಕ್ರಮಗಳಿಗೆ ಒತ್ತು ನೀಡುವ ಉದ್ದೇಶವಿದ್ದು, ಇದಕ್ಕಾಗಿ ಸೆಪ್ಟಂಬರ್ ತಿಂಗಳಿನಲ್ಲಿ ವಿಶೇಷ ಪ್ರಚಾರಾಂದೋಲನವನ್ನು ಜಿ.ಪಂ.ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾರದ ನರಸಿಂಹಮೂರ್ತಿ ತಿಳಿಸಿದರು.
ವಿಶೇಷ ಪ್ರಚಾರಾಂದೋಲನದ ಅಂಗವಾಗಿ ಜಿಲ್ಲೆಯ ಎಲ್ಲಾ ೩೩೧ ಗ್ರಾಮಪಂಚಾಯಿತಿಯ ತಲಾ ಒಂದು ಹಳ್ಳಿಯಲ್ಲಿ  ಆಕ್ಟೋಬರ್ ೦೨ ರಂದು ಗ್ರಾಮ ಸಭೆ ನಡೆಸಿ, ಆ ಹಳ್ಳಿಗೆ ಅಗತ್ಯವಿರುವ ಸಮುದಾಯ ಅಭಿವೃದ್ದಿಯ ಜೊತೆಗೆ,ವಯುಕ್ತಿಕ ಕೆಲಸಗಳ ಬೇಡಿಕೆಗಳ ಪಟ್ಟಿ ಪಡೆದು, ೨೦೧೯-೨೦ರ ಕ್ರಿಯಾಯೋಜನೆ ತಯಾರಿಸಲು ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ ಅಧಿಕಾರಿಗಳ ಮೂಲಕ ಶಾಲೆಗಳು, ಅಂಗನವಾಡಿಗಳ ಕಾಂಪೌಂಡ್ ನಿರ್ಮಾಣಕ್ಕೂ ಸಹ ಕ್ರಿಯಾ ಯೋಜನೆ ತಯಾರಿಸಿ, ಹಂತ ಹಂತವಾಗಿ ಅನುಮೋಧನೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿ.ಪಂ.ಸಿಇಓ ಅನೀಸ್ ಕೆ.ಜಾಯ್ ಮಾತನಾಡಿ, ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಅವರುಗಳು ನೀಡಿರುವ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ೪೨೮ ಶಾಲಾ ಕಾಂಪೌಂಡ್ ನಿರ್ಮಾಣ,೧೦೪ ಶಾಲಾ ಶೌಚಾಲಯ ನಿರ್ಮಾಣ, ೨೬೭ ಅಂಗನವಾಡಿ ಶೌಚಾಲಯ ನಿರ್ಮಾಣ, ೨೦೦ ಅಕ್ಷರ ದಾಸೋಹ ಅಡುಗೆ ಮನೆ ನಿರ್ಮಾಣ, ೧೨೯೩ ಆಟದ ಮೈದಾನಗಳ ನಿರ್ಮಾಣಕ್ಕೆ ಬೇಡಿಕೆ ಇದ್ದು, ೨೦೧೮-೧೯ನೇ ಸಾಲಿನಲ್ಲಿ ೧೬೮ ಶಾಲಾ ಕಾಂಪೌಂಡ್, ೫೪ ಶಾಲಾ ಶೌಚಾಲಯ, ೫೧ ಅಕ್ಷರ ದಾಸೋಹ ಕೊಠಡಿ ಹಾಗೂ ೩೩೧ ಆಟದ ಮೈದಾನಗಳ ನಿರ್ಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.೨೦೧೯-೨೦ ನೇ ಸಾಲಿನಲ್ಲಿ ೨೬೦ ಶಾಲಾ ಕಾಂಪೌಂಡ್, ೫೦ ಶೌಚಾಲಯ, ೨೬೭ ಅಂಗನವಾಡಿ ಶೌಚಾಲಯ,೧೪೯ ಅಕ್ಷರ ದಾಸೋಹ ಅಡುಗೆ ಕೇಂದ್ರ ಹಾಗೂ ೯೬೨ ಆಟದ ಮೈದಾನಗಳ ಅಭಿವೃದ್ದಿಗೆ ಕ್ರಿಯಾಯೋಜನೆ ರೂಪಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ವಾಸ್ತವ್ಯ:ಸರಕಾರ ಎಂಎನ್‌ಆರ್‌ಇಜಿಎ ಅಡಿಯಲ್ಲಿ ವಯುಕ್ತಿಕವಾಗಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಜನರಿಗೆ ಸರಕಾರದ ಯೋಜನೆಯ ಸದುಪಯೋಗಕ್ಕೆ ಜಾಗೃತಿ ಮೂಡಿಸಲಾಗುವುದು ಎಂದು ಸಿಇಓ ಅನೀಸ್ ಕೆ.ಜಾಯ್ ನುಡಿದರು.
ಗ್ರಾ.ಪಂ ಮೂಲಕ ಪಹಣಿ ಹಂಚಿಕೆ:ನಾಡ ಕಚೇರಿಗಳಿಗೆ ರೈತರಿಗೆ ಅಗತ್ಯವಿರುವ ಪಹಣಿ ಹಂಚಿಕೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಗ್ರಾ.ಪಂ.ಕಚೇರಿಗಳಲ್ಲಿಯೂ ಪಹಣಿ ಹಂಚಿಕೆ ಮಾಡಲು ಸರಕಾರ ನಿರ್ಧರಿಸಿದೆ. ಇದರ ಅಂಗವಾಗಿ ಜಿಲ್ಲೆಯ ಎಲ್ಲಾ ೩೩೧ ಗ್ರಾ.ಪಂ.ಗಳಲ್ಲಿಯೂ ಸೆಪ್ಟಂಬರ್ ೦೧ ರಿಂದ ಪಹಣಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುತ್ತಿದೆ.ಪ್ರಸ್ತುತ ಜಿಲ್ಲೆಯ ೧೮೪ ಗ್ರಾ.ಪಂ.ಗಳಲ್ಲಿ ಹಾಲಿ ಆರ್.ಟಿ.ಸಿ. ನೀಡುತಿದ್ದು,ಚಿಕ್ಕನಾಯಕನಹಳ್ಳಿ ತಾಲೂಕಿನ ಎಲ್ಲಾ ಗ್ರಾ.ಪಂ.ಗಳಲ್ಲಿ ಆರ್.ಟಿ.ಸಿ. ದೊರೆಯುತ್ತಿದೆ. ಇದುವರೆಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ೧೮೪ ಗ್ರಾ.ಪಂ.ಆರ್.ಟಿ.ಸಿ. ವಿತರಣಾ ಕೇಂದ್ರಗಳಿಂದ ೧೫೪೩ ಪಹಣಿಗಳನ್ನು ವಿತರಿಸಲಾಗಿದೆ ಎಂದು ಸಿಇಓ ಅನೀಸ್ ಕೆ.ಜಾಯ್ ನುಡಿದರು.
ಅನ್‌ಲೈನ್ ಮೂಲಕ ಮೆ.ಪೂ.ವಿದ್ಯಾರ್ಥಿವೇತನ: ರಾಜ್ಯ ಸರಕಾರದ ತೀರ್ಮಾನದಂತೆ ೧ ರಿಂದ ೧೦ ತರಗತಿವರೆಗೆ ಕಲಿಯುತ್ತಿರುವ ಪರಿಶಿಷ್ಟ ಜಾತಿ, ವರ್ಗ,ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಅನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ಹಂಚಿಕೆ ಮಾಡಲಾಗುತ್ತಿದೆ.ಸಮಾಜ ಕಲ್ಯಾಣ ಇಲಾಖೆಯಿಂದ ೪೩,೯೬೯ ಮಕ್ಕಳಿಗೆ ೪,೮೩,೬೫,೯೦೦ ರೂ, ಪರಿಶಿಷ್ಟ ವರ್ಗದ ೧೭೮೩೧ ಮಕ್ಕಳಿಗೆ ೧,೯೬,೧೪,೧೦೦ ರೂ, ಹಿಂದುಳಿದ ವರ್ಗಗಳ ೧,೦೮,೫೯೯ ಮಕ್ಕಳಿಗೆ ೧೦,೮೫,೯೯,೦೦೦ ರೂ,ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ೧,೮೭,೭೩೬ ಮಕ್ಕಳಿಗೆ ೧೯,೩೯,೧೬,೦೦೦ ರೂ ಗಳನ್ನು ಪ್ರಸ್ತಾವನೆ ಸಲ್ಲಿಸಿದ್ದು,ಇದುವರೆಗೂ ೨೫೦೦ ವಿದ್ಯಾರ್ಥಿಗಳಿಗೆ ನೇರವಾಗಿ ಅವರ ಖಾತೆಗೆ ವಿದ್ಯಾರ್ಥಿ ವೇತನದ ಹಣ ಸಂದಾಯ ಮಾಡಲಾಗಿದೆ.ಶಾಲೆಯಲ್ಲಿ ಓದುತ್ತಿರುವ ಮೇಲಿನ ನಾಲ್ಕು ವರ್ಗಗಳ ವಿದ್ಯಾರ್ಥಿಗಳನ್ನು ಹೆಸರನ್ನು ನೊಂದಾ ಯಿಸುವ ಜವಾಬ್ದಾರಿಯನ್ನು ಅಯಾಯ ಶಾಲಾ ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ ಎಂದು ಸಿಇಓ ತಿಳಿಸಿದರು. (ಫೋಟೋ ಇದೆ)

No comments:

Post a Comment

vishalaprabha 09-02-2019 pages