ಸೆ.೦೭ರಂದು ಸೀತಕಲ್ಲು ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸೆ.೦೭ರ ಬೆಳಗ್ಗೆ ೭.೩೦ಕ್ಕೆ ಸೀತಕಲ್ಲು ಗ್ರಾಪಂ ಅಧ್ಯಕ್ಷೆ ನರಸಮ್ಮ ಅವರಿಂದ ರಾಷ್ಟ್ರಧ್ವಜ,ಊರ್ಡಿಗೆರೆ ಕಸಾಪ ಅಧ್ಯಕ್ಷ ಹೊನ್ನಾರು ರಂಗಸ್ವಾಮಿ ಅವರಿಂದ ನಾಡಧ್ವಜ, ತಾಲ್ಲೂಕು ಕಸಾಪ ಅಧ್ಯಕ್ಷೆ ಬಿ.ಸಿ.ಶೈಲಾನಾಗರಾಜ್ ಅವರಿಂದ ಪರಿಷತ್ತು ಧ್ವಜಾರೋಹಣ ನೆರವೇರಲಿದೆ ಎಂದರು.
ಕನ್ನಡಮಾತೆ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರಾಗಿರುವ ಸೀತಕಲ್ಲು ಕೃಷ್ಣಯ್ಯ ಅವರನ್ನು ಬೆಳಗ್ಗೆ ೯ ಗಂಟೆಗೆ ವೀರಗಾಸೆ, ನಂದಿದ್ವಜ, ಕೋಲಾಟ, ನಗಾರಿ, ಸೋಮನಕುಣಿತ, ಗಾರುಡಿಗ ಗೊಂಬೆ ಕುಣಿತ ವಿವಿಧ ಜಾನಪದ ಕಲಾಮೇಳಗಳೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು. ಈ ಮೆರವಣಿಗೆಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಚಾಲನೆ ನೀಡಲಿದ್ದು,ಸೀತಕಲ್ಲು ಹೊರನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎಸ್.ಎಂ.ಸಿದ್ಧಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಬಿ.ನರೇಂದ್ರಕುಮಾರ್,ಗ್ರಾಪಂ ಸದಸ್ಯರಾದ ಪರಮೇಶ್,ನಾಗೇಶ್,ಲಕ್ಷ್ಮೀದೇವಮ್ಮ, ಉಪತಹಶೀಲ್ದಾರ್ ಶಂಕರರಾವ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬೆಳಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಚಲನಚಿತ್ರ ನಟ ಎಸ್.ಶಿವರಾಂ ಉದ್ಘಾಟಿಸಲಿದ್ದು, ಸಮ್ಮೇಳನಾಧ್ಯಕ್ಷರಾದ ಸೀತಕಲ್ಲು ಕೃಷ್ಣಯ್ಯ ಪ್ರಧಾನ ಭಾಷಣ ಮಾಡಲಿದ್ದಾರೆ.ಸಾಹಿತ್ಯ ಸಮ್ಮೇಳನದ ಮಹಾಪೋಷಕರಾದ ಟಿ.ಬಿ.ಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಪುಸ್ತಕ ಬಿಡುಗಡೆ ಮಾಡುವರು. ಸೀತಕಲ್ಲು ಕೃಷ್ಣಯ್ಯ ಅವರ ಬದುಕು ಸಾಧನೆ ಕುರಿತು ಸಹಾಯಕ ಪ್ರಾಧ್ಯಾಪಕ ಡಾ.ಹೊನ್ನಾಂಜಿನಯ್ಯ ವಿಷಯ ಮಂಡಿಸುವರು. ಅತಿಥಿಗಳಾಗಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಹೆಚ್.ಎಸ್. ಸಿದ್ದಗಂಗಪ್ಪ ಬ್ಯಾತ, ಎಸ್.ಜಿ.ಚಂದ್ರಮೌಳಿ, ಬಿ.ಜಿ.ಕೃಷ್ಣಪ್ಪ, ಬಿಇಒ ಸಿ.ರಂಗಧಾಮಪ್ಪ, ಭುಮಿ ಬಳಗದ ಅಧ್ಯಕ್ಷ ಜಿ.ಎಸ್. ಸೋಮಣ್ಣ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಬಿ.ಜಿ. ಗಂಗಹನುಮಯ್ಯ, ತಹಶೀಲ್ದಾರ್ ನಾಗರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ ೧ ಗಂಟೆಗೆ ವಿಚಾರಗೋಷ್ಠಿ, ೨ ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಗೋಷ್ಠಿಗಳಲ್ಲಿ ಕವಿಗಳು ಭಾಗವಹಿಸಿ ವಿಷಯ ಮಂಡಿಸುವರು.
ಮಧ್ಯಾಹ್ನ ೩.೩೦ಕ್ಕೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ, ಸಮ್ಮೇಳನಾಧ್ಯಕ್ಷರಿಗೆ ಗೌರವಾಭಿನಂದನೆ ಹಾಗೂ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದ್ದು, ಟಿ.ಬಿ.ಶೇಖರ್ ಅಧ್ಯಕ್ಷತೆ ವಹಿಸುವರು, ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಸಮ್ಮೇಳನದ ಮಹಾಪೋಷಕರಾದ ಟಿ.ಬಿ.ಶೇಖರ್, ಸ್ವಾಗತ ಸಮಿತಿ ಕಾರ್ಯದರ್ಶಿ ಡಾ.ಡಿ.ಆರ್.ಹೊನ್ನಾಂಜಿನಯ್ಯ, ಊರ್ಡಿಗೆರೆ ಹೋಬಳಿ ಕಸಾಪ ಅಧ್ಯಕ್ಷ ಹೊನ್ನಾರು ರಂಗಸ್ವಾಮಿ ಉಪಸ್ಥಿತರಿದ್ದರು.
No comments:
Post a Comment