ತುಮಕೂರು ಘಟಕಕ್ಕೆ ಇಸ್ರೋ ಅಧ್ಯಕ್ಷರ ಭೇಟಿ ಪರಿಶೀಲನೆ
ಮುಂಬರುವ ಸೋಮವಾರದಿಂದಲೇ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರಿನ ಘಟಕದಲ್ಲಿ ಅತ್ಯಂತ ಬೆಲೆ ಬಾಳುವ ಮತ್ತು ಇದುವರೆವಿಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಸೋಲಾರ್ ಸೆಲ್‌ಗಳ (ಸೌರಕೋಶ) ಮತ್ತು ಉಪಗ್ರಹ ಟ್ಯಾಂಕರ್‌ಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಇಸ್ರೋನ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ತುಮಕೂರಿನ ಉತ್ಪಾದನಾ ಘಟಕವೂ ಬಹಳ ಮಹತ್ವವಾದದು ಆಗಲಿದೆ ಎಂಬುದರ ಜೊತೆಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದರು.
ಇಸ್ರೋ ಅಧ್ಯಕ್ಷರನ್ನು ಹಾಗೂ ಉನ್ನತ ಅಧಿಕಾರಿಗಳನ್ನು ಬರಮಾಡಿಕೊಂಡು ಉದ್ದೇಶಿತ ಯೋಜನೆಯ ಪೂರ್ಣ ವಿವರಗಳನ್ನು ಸಂಸದ ಮುದ್ದಹನುಮೇಗೌಡರು ಪಡೆದುಕೊಂಡರು.
No comments:
Post a Comment