ಭಾಷೆ ಕಟ್ಟುವ ಕೆಲಸ ಗ್ರಾಮೀಣರಲ್ಲೇ ಹೆಚ್ಚು: ನಟ ಶಿವರಾಂ
ತುಮಕೂರು: ಇಂದು ಕನ್ನಡ ಕಟ್ಟುವ ಕೆಲಸ ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ ಎಂದು ಹಿರಿಯ ಚಿತ್ರನಟ ಶಿವರಾಂ ಅಭಿಪ್ರಾಯಪಟ್ಟಿದ್ದಾರೆ.ತುಮಕೂರು ತಾಲೂಕು ಸೀತಕಲ್ಲು ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸೀತಕಲ್ಲು ಹೊರನಿವಾಸಿಗಳ ಸಂಘದವತಿಯಿಂದ ಆಯೋಜಿಸಿದ್ದ ಉರ್ಡಿಗೆರೆ ಹೋಬಳಿಯ ೨ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಂದು ಇಡೀ ಹೋಬಳಿಯೇ ಸಾಹಿತ್ಯ ಕಾರ್ಯಕ್ರಮವನ್ನು ತಮ್ಮ ಊರಿನ ಜಾತ್ರೆಯೋ, ಹಬ್ಬವೋ ಎಂಬ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಿದೆ.ನಗರ ಪ್ರದೇಶದಲ್ಲಿ ನಡೆಯುವ ಸಮ್ಮೇಳನಗಳಿಗೆ ಹೊಲಿಕೆ ಮಾಡಿದರೆ, ಇಂದಿನ ಕಾರ್ಯಕ್ರಮ ಅತ್ಯಂತ ಉತ್ಕೃಷ್ಟವಾಗಿದೆ ಎಂದರು.
ಕನ್ನಡ ಭಾಷೆ, ನೆಲ, ಜಲದ ಸೇವೆಗೆ ಜಾತಿ, ಮತದ ಭೇಧವಿಲ್ಲ.ಭಾಷೆ, ನೆಲ,ಜಲಕ್ಕೆ ಧಕ್ಕೆ ಉಂಟಾದಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಕುಲ ಎಂಬುದನ್ನು ನಾವು ಮರೆಯುವಂತಿಲ್ಲ.ಹೇಗೆ ಆಯ್ಯಪ್ಪನ ಸೇವೆಗೆ ಜಾತಿ,ಮತದ ಸೊಂಕಿಲ್ಲವೋ, ಅದೇ ರೀತಿ ಭಾಷೆಯ ಸೇವೆಗೂ ಯಾವುದೇ ಭೇಧ ಭಾವವಿಲ್ಲವೆಂದು ಶಿವರಾಂ ನುಡಿದರು.
ಉರ್ಡಿಗೆರೆ ಹೋಬಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ರಂಗ ಕರ್ಮಿಯೊಬ್ಬರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಸಂತೋಷ ಪಡುವ ವಿಚಾರ.ನಮ್ಮ ಭಾಷೆಯ ಬೆಳವಣಿಗೆಯಲ್ಲಿ ನಾಟಕಗಳ ಪ್ರಾತ್ರ ಮಹತ್ವದ್ದು,ಅದು ನಮ್ಮ ಸಂಸ್ಕೃತಿಯ ಮೂಲ ಎಂದ ಅವರು,ಇಂದು ತಾಯಂದಿರುವ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದು, ನಿವೆಲ್ಲರೂ ತಾಯಿ ಭುವನೇಶ್ವರಿಯ ಪ್ರತೀಕ.ಕನ್ನಡ ಭಾಷೆ ಕಟ್ಟುವ ನಿಟ್ಟಿನಲ್ಲಿ ನೀವೆಲ್ಲರೂ ಕೈಜೋಡಿಸಬೇಕೆಂದು ಶಿವರಾಮ ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಸೀತಕಲ್ಲು ಹೊರನಿವಾಸಿಗಳ ಸಂಘದ ಅಧ್ಯಕ್ಷ ಎಸ್.ಎಂ.ಸಿದ್ದಪ್ಪ ಚಾಲನೆ ನೀಡಿದರು.
No comments:
Post a Comment